ಭಾರತ ಸೇರಿ 5 ದೇಶಗಳನ್ನು ' ಮಿತ್ರ ರಾಷ್ಟ್ರ 'ಎರದಿರುವ ಇರಾನ್, ಈ ದೇಶಗಳ ವಾಣಿಜ್ಯ ನೌಕಾಯಾನಕ್ಕೆ ಹೊರ್ಮುಜ್ ಜಲಸಂಧಿಯನ್ನು ತೆರೆಯವುದಾಗಿ ಗುರುವಾರ ತಿಳಿಸಿದೆ. ಇರಾನ್ನ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಷ್ಚಿ ಈ ಬಗ್ಗೆ ಮಾಹಿತಿ ನೀಡಿದ್ದು, 'ನಾವು ಕೆಲವು ದೇಶಗಳನ್ನು ಮಿತ್ರರೆಂದು ಪರಿಗಣಿಸಿದ್ದು, ಹೊರ್ಮುಜ್ ಜಲಸಂಧಿ ಮೂಲಕ ಈ ರಾಷ್ಟ್ರಗಳ ನೌಕೆಗಳು ಸಂಚರಿಸಲು ಅನುಮತಿ ನೀಡಿದ್ದೇವೆ. ಭಾರತ, ಪಾಕಿಸ್ತಾನ, ಇರಾಕ್, ಚೀನಾ, ರಷ್ಯಾ ಗಳಿಗೆ ಹನುಮತಿ ನೀಡಲಾಗಿದೆ. ಜೊತೆಗೆ ಯುದ್ಧದಲ್ಲಿ ಭಾಗಿಯಾಗಿರುವ ಅಮೆರಿಕ ಇಸ್ರೇಲ್ ಆಗೋ ಅವರ ಮಿತ್ರ ರಾಷ್ಟ್ರಗಳು ಹೊರ್ಮುಜ್ ಮೂಲಕ ಹಾದು ಹೋಗಲು ಇರುವ ನಿರ್ಬಂಧ ಮುಂದುವರಿಯಲ್ಲಿದೆ ' ಎಂದಿದ್ದಾರೆ.
ಸೂಯೆಜ್ ಪ್ರವೇಶ ದ್ವಾರ ಸ್ಥಗಿತ - ಇರಾನ್
ಜಾಗತಿಕ ತೈಲ ಸಾಗಣೆಯ ಜೀವನಾಡಿಯಾಗಿರುವ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿರುವ ಇರಾನ್, ಇದೀಗ ಸೂಯೆಜ್ ಕಾಲುವೆಯ ಪ್ರವೇಶ ದ್ವಾರವಾದ, 'ಬಾಬ್ ಅಲ-ಮಂದೇಬ್' ಜಲಸಂಧಿಯನ್ನು ಮುಚ್ಚುವುದಾಗಿ ಅಮೆರಿಕ ಮತ್ತು ಇಸ್ರೇಲ್ ಗೆ ನೇರ ಎಚ್ಚರಿಕೆ ನೀಡಿದೆ. ಅಮೆರಿಕ ಅಥವಾ ಇಸ್ಟೇಲ್ ಪಡೆಗಳೇನಾದರೂ ಇರಾನ್ ದ್ವೀಪಗಳ ಮೇಲೆ ದಾಳಿ ನಡೆಸಲು ಮುಂದಾದರೆ ಬಾಬ್ ಅಲ್ -ಮಂದೇಬ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚುತ್ತೇವೆ ಎಂದಿದೆ. ವಿಶ್ವದ ಒಟ್ಟು ತೈಲ ಸಾಗಣೆಯಲ್ಲಿ 12% ರಷ್ಟು ಭಾಗ ಈ ಕಿರಿವಾರ ಜಲಸಂಧಿಯ ಮೂಲಕವೇ ಸಾಗುತ್ತದೆ.
